ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫, ೧೯೬೧, ಹುಟ್ಟುಹೆಸರು ಸುಹಾಸಿನಿ) ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿರತ್ನಂ ಸುಹಾಸಿನಿ ಅವರ ಪತಿ. "ನೆಂಜತ್ತೆ ಕಿಳ್ಳಾದೆ" ಚಿತ್ರದ ಮೂಲಕ ನಟಿಯಾದ ಸುಹಾಸಿನಿಯವರು ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿಯೂ ಅನುಭವ ಹೊಂದಿದ್ದಾರೆ. ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಬಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ" ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. "ಸಿಂಧು ಭೈರವಿ’" ಚಿತ್ರದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ನಾಯಕನಟರು, ಎಲ್ಲಾ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ, "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ. == ಆಯ್ದ ಚಲನಚಿತ್ರಗಳ ಪಟ್ಟಿ == ಸುಹಾಸಿನಿ ಅಭಿನಯದ ಕೆಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ. ==== ಕನ್ನಡ ==== ==== ಹಿಂದಿ/ಇಂಗ್ಲಿಷ್ ==== ==== ನಿರ್ದೇಶಕಿಯಾಗಿ ==== ==== ಕಂಠದಾನಿಯಾಗಿ ==== == ಉಲ್ಲೇಖಗಳು ==